FLASH NEWS

ನಮ್ಮ ಶಾಲೆಯ ಬ್ಲಾಗಿಗೆ ಎಲ್ಲರಿಗೂ ಆದರದ ಸ್ವಾಗತ...........

Wednesday 12 September 2018

*ವಿಘ್ನ ನಿವಾರಕನ ಹಬ್ಬ , ಗಣೇಶ ಚತುರ್ಥಿ*

*"ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರುಮೇದೇವ ಸರ್ವ ಕಾರ್ಯೇಷು ಸರ್ವದ*"

    ಭಾದ್ರಪದ  ಮಾಸದ  ನಾಲ್ಕನೇ  ದಿನ  ಚೌತಿ  ಹಬ್ಬವು  ಬರುತ್ತದೆ. ಎಲ್ಲ  ದೇವರುಗಳಿಗಿಂತಲೂ  ಅಗ್ರಸ್ಥಾನದಲ್ಲಿರುವ  ಗಣೇಶನ  ಪೂಜೆಯು  ಸಾರ್ವಾತ್ರಿಕವಾಗಿ  ನಡೆಯುತ್ತದೆ .ಗಣಪತಿಯ  ಆರಾಧನೆಯು  ಅನಾದಿ ಕಾಲದಿಂದಲೂ  ನಡೆದು  ಬಂದಿರುವ  ಪದ್ಧತಿಯಾಗಿದೆ . ಗಣೇಶ  ಚತುರ್ಥಿ  ಹಬ್ಬವನ್ನು  ಭಾರತದಾದ್ಯಂತ  ಬಹಳ ಉತ್ಸಾಹದಿಂದ  ಆಚರಿಸಲಾಗುತ್ತದೆ .ಮಹಾರಾಷ್ತ್ರದಲ್ಲಿ ಈ  ಹಬ್ಬಕ್ಕೆ  ವಿಶೇಷ  ಮಾನ್ಯತೆಯಿದೆ . ಯಾಕೆಂದರೆ  ಮಹಾರಾಷ್ಟ್ರ ದ  ಪುಣೆಯಲ್ಲಿ ಜನಿಸಿದ  ಬಾಲಗಂಗಾಧರ  ತಿಲಕರು  ಬ್ರಿಟಿಷರ  ಆಡಳಿತ  ಕಾಲದಲ್ಲಿ   ಜನರಲ್ಲಿ ಒಗ್ಗಟ್ಟು  ಹಾಗು  ಸೌಹಾರ್ದತೆಯನ್ನು  ಬೆಳೆಸಲು  ಗಣೇಶ ಚತುರ್ಥಿಯನ್ನು  ಸಾರ್ವಜನಿಕ  ಹಬ್ಬವಾಗಿ  ಆಚರಿಸಲು  ಮುಂದಾದರು . 

ಭಾರತೀಯ  ಜನಜೀವನದಲ್ಲಿ  ಗಣಪತಿಯ  ಸ್ಥಾನ  ಅಗ್ರಗಣ್ಯವಾಗಿದೆ .ಗಣೇಶನು  ವಿಘ್ನನಿವಾರಕನಾಗಿದ್ದಾನೆ . ಯಾವುದೇ  ಉತ್ಸವ  ಶುಭ  ಕಾರ್ಯಗಳ  ಆರಂಭದಲ್ಲಿ  ಗಣೇಶನ  ಪೂಜೆ  , ಸ್ತುತಿ ನಡೆಯುತ್ತದೆ . ಇದರಿಂದ  ಕಾರ್ಯಕ್ರಮವು  ನಿರ್ವಿಘ್ನವಾಗಿ  ನಡೆಯುತ್ತದೆ  ಎಂಬ  ನಂಬಿಕೆಯಿದೆ . ಇದಕ್ಕೆ  ಕಾರಣ  ಗಣೇಶನಿಗೆ  ಶಿವ  ಮತ್ತು  ಇತರ  ದೇವತೆಗಳ  ಮೂಲಕ  ಈ  ವರವು  ಲಭಿಸಿದುದಾಗಿದೆ

ವಿದ್ಯೆ  ಹಾಗು  ಬುದ್ದಿಯ  ದೇವತೆ  ಗಣಪತಿ. ಆದಕಾರಣ  ಸಾಹಿತ್ಯ  ಕ್ಷೇತ್ರದಲ್ಲಿಯೂ  ಮೊದಲು  ಗಣೇಶನ ಸ್ತುತಿಯನ್ನು  ಮಾಡಲಾಗುತ್ತದೆ . ಅವನು  ಸಕಲ  ಶಾಸ್ತ್ರಗಳ  ಜ್ಞಾನಿ  ಎಂದು  ತಿಳಿಯಲಾಗುತ್ತದೆ. .ಗಣಪತಿಯ ನಿತ್ಯ ಪೂಜೆಯಿಂದ ವಿದ್ಯಾದೇವತೆ  ಸರಸ್ವತಿಯು  ಸಂಪನ್ನಳಾಗುತ್ತಾಳೆ .ಗಣೇಶನು  ಮೋದಕ  ಪ್ರಿಯನಾಗಿದ್ದಾನೆ .ಅವನ  ವಾಹನ  ಇಲಿ . ಇಲಿ ಬಹಳ ಚಂಚಲವಾಗಿದೆ .ಚಂಚಲತೆ  ಮನಸ್ಸಿನ  ಪ್ರತೀಕವಾಗಿದೆ .ಗಣೇಶನ  ಪೂಜೆಯಿಂದ  ಮನಸ್ಸಿಗೆ  ಶಾಂತಿ  ಲಭಿಸುತ್ತದೆ .

ಗಣೇಶ  ಚತುರ್ಥಿಯ  ದಿನ  ಯಾರು ಚಂದ್ರನನ್ನು ನೋಡುವಂತಿಲ್ಲ .ನೋಡಿದರೆ  ಕಳ್ಳತನದ   ಅಪವಾದ  ಬರುವುದೆಂಬ  ನಂಬಿಕೆಯಿದೆ .ಈ  ಕಾರಣದಿಂದ  ಚೌತಿಯ  ದಿನ  ಚಂದ್ರನನ್ನು  ನೋಡುವ  ಸಾಹಸವನ್ನು  ಯಾರು  ಮಾಡುವುದಿಲ್ಲ . 

ಗಣೇಶನಿಗೆ  ಹಲವಾರು ಹೆಸರುಗಳಿವೆ .ಗಣೇಶ ,ವಿಘ್ನೇಶ ,ಗಣಪತಿ,ವಿನಾಯಕ ,ಲಂಬೋದರ , ಗಜಮುಖ , ವಕ್ರತುಂಡ , ಏಕದಂಥ , ಹೇರಂಭ , ಈಶಪುತ್ರ .... ಹೀಗೆ  ಇನ್ನು  ಹಲವಾರು .ಗಣಪತಿಯ  ವ್ಯಕ್ತಿತ್ವದಲ್ಲಿ  ಆನೆಯ  ಗುಣ , ಬುದ್ಧಿ , ಬಲವಿದೆ , ಆದುದರಿಂದ  ಗಣೇಶನ  ಪೂಜೆಯು  ಬುದ್ಧಿ ,ಬಲ ವನ್ನೊಳಗೊಂಡ ಸಂಪನ್ನ   ಪೂಜೆಯಾಗಿದೆ .

ಎಷ್ಟು  ಸಡಗರದಿಂದ ಗಣೇಶನನ್ನು  ತಂದು  ಪೂಜಿಸುತ್ತಾರೋ  ಅಷ್ಟೇ  ವೈಭವದಿಂದ  ಗಣಪತಿ  ವಿಸರ್ಜನೆಯ  ಕಾರ್ಯಕ್ರಮಗಳು ಜರಗುತ್ತದೆ .ವಿಸರ್ಜನೆಯ ಸಂಧರ್ಭದಲ್ಲಿ  ಈ ರೀತಿ ಪ್ರಾರ್ಥಿಸಲಾಗುತದೆ  ಈ  ವರ್ಷ  ನಾವು  ನಿಮ್ಮನು  ದುಃಖದಿಂದ  ವಿದಾಯ  ಮಾಡುತ್ತೇವೆ .ಮತ್ತು ನಿಮ್ಮಲ್ಲಿ   ಪ್ರಾರ್ಥನೆ  ಏನೆಂದರೆ  ಬರುವ  ವರ್ಷ  ನೀವು  ಬೇಗನೆ  ಬಂದು  ಕೃಪೆ  ಮಾಡಿರಿ .

ಗಣಪತಿ  ಹಬ್ಬದಲ್ಲಿ ಬಡವ , ಬಲ್ಲಿದ , ಹಿರಿಯ , ಕಿರಿಯ , ಮೇಲು  ಕೀಳು  ಎಂಬ  ಬೇಧಭಾವಗಳಿಲ್ಲದೆ  ಎಲ್ಲ  ವರ್ಗಗಳ  ಜನರೂ  ಭಾಗವಹಿಸುತ್ತಾರೆ. ಹೀಗೆ  ನಮ್ಮ  ದೇಶದಲ್ಲಿ . ಸಂಭ್ರಮ  ಸಡಗರದಿಂದ  ನಡೆಯುವ  ಹಬ್ಬದಲ್ಲಿ   ನಾವೆಲ್ಲರೂ  ಭಾಗಿಗಳಾಗೋಣ  ಹಾಗು  ಗಣೇಶನ  ಕೃಪೆಗೆ  ಪಾತ್ರರಾಗೋಣ. ಸಮಸ್ತ ಜನರಿಗೂ 

*ವಿಪ್ರಭ  ನ್ಯೂಸ್ ವತಿಯಿಂದ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು.*

Wednesday 1 August 2018